ನಮಿಪೆ ವಾರಣವದನ ಅಮಿತ ಕರುಣಾ ಸದನ
ಸುಮಸುಕೋಮಲ ಚರಣ ವಿಘ್ನ ಹರಣಾ
ಶಂಭು ಸುತ ಗಂಭೀರ ಅಂಬಾ ಕೃತ ಶರೀರ
ಹೇರಂಬ ಅವಿಡಂಬ ಲಂಬೋದರಾ
ಪಂಚಖಾದ್ಯ ಪ್ರಿಯನೇ ವಾಂಛಿತಾರ್ಥ ಪ್ರದನೇ
ಪಂಚವಾದ್ಯ ಪ್ರಮೋದ ಪಂಕೇಜ ಪದನೇ
.....✍️ಶ್ರೀಪತಿ ಸುತ

0 Comments:
Post a Comment
Subscribe to Post Comments [Atom]
<< Home